ಕನ್ನಡ ನೀತಿ ಕಥೆಗಳು, Kannada Policy Stories, Neeti Kathegalu, ಮಕ್ಕಳ ಕಥೆ ಕನ್ನಡ PDF Free Download
ಕನ್ನಡ ನೀತಿ ಕಥೆಗಳು PDF
ವಿಷಯ : ಕನ್ನಡ ನೀತಿ ಕಥೆಗಳು 01.ಮಂಗ ಮತ್ತುಮೊಸಳೆ ಒಂದು ನದಿಯಲ್ಲಿ ಒಂದು ಮೊಸಳೆ ಮತ್ತು ಅದರ ಹೆಂಡತಿ ವಾಸವಾಗಿದ್ದವು. ಆ ನದಿಯಲ್ಲಿ ಮೀ ನುಗಳು ಕಡಿಮೆಯಾಗಿದ್ದರಿಂದ ಮೊಸಳೆಗಳು ಹಸಿದುಕೊ ಂಡೇ ನದಿಯಲ್ಲಿ ಅತ್ತಿಂದಿತ್ತಈಜಾಡುತ್ತಾ,್ತಾಯಾರಾದರೂ ತಮಗೆ ಆಹಾರ ಕೊ ಡುವರೇ ಎಂದು ದಿನವೂ ಕಾಯುತ್ತಿದ್ದವು. ಹೀ ಗಿರುವಾಗ ಒಂದು ದಿನ ಗಂಡ ಮೊಸಳೆಯ ಕಣ್ಣಿಗೆ ಮರದ ಮೇ ಲಿರುವ ಮಂಗವೊಂದು ಬಿತ್ತು. ಆ ಮಂಗ ಏನನ್ನ ೋ ಚಪ ್ಪ ರಿಸಿಕೊ ಂಡು ತಿನ್ನುತ್ತಿತ್ತು.
ಆಗ ಮೊಸಳೆ ದಡಕ್ಕೆ ಬಂದು, “ಮಂಗಣ್ಣಾ, ಮಂಗಣ್ಣಾ… ನೀ ನು ಏನನ್ನು ತಿನ್ನುತ್ತಿರುವೆ ಎಂದು ಕೇ ಳಿತು. ಆಗ ಮಂಗ, “ಮೊಸಳೆ… ಮೊಸಳೆ… ಇದು ಮಾವಿನ ಹಣ್ಣು, ಇದು ತುಂಬಾ ಸಿಹಿಯಾಗಿರುತ್ತದೆ,” ಎಂದಿತು. ಆಗ ಮೊಸಳೆ, “ಮಂಗಣ್ಣಾ, ನನ್ನ ನದಿಯಲ್ಲಿ ಮೀ ನುಗಳು ಕಡಿಮೆ, ಇರುವ ಮೀ ನುಗಳು ತುಂಬಾ ಚಾಲಾಕಿ, ಅವು ನಮ್ಮ ಕೈ ಗೇ ಸಿಗದೆ ದೂರ ಈಜಿ ಹೋ ಗುತ್ತವೆ. ಹೀ ಗಾಗಿ ನಾನು ನನ್ನ ಹೆಂಡತಿ ಎಷ್ಟ ೋ ದಿವಸದಿಂದ ಹಸಿದುಕೊ ಂಡೇ ಇದ್ದೇವೆ.
ಆಕೆ ನಾನು ಏನಾದರೂ ತರುತ್ತೇನೆ ಎಂದು ನನ್ನ ದಾರಿಯನ್ನೇ ಕಾಯುತ್ತಿರುತ್ತಾಳೆ… ನನಗೂ ಸ್ವಲ ್ಪ ಹಣ್ಣುಗಳನ್ನು ಕಿತ್ತು ಕೊ ಡುವೆಯಾ…?” ಎಂದು ಕೇ ಳಿತು. “ಅಯ್ಯೋ… ಅದಕ್ಕ ೇನಂತೆ? ಧಾರಾಳವಾಗಿ ಕಿತ್ತುಕೊ ಡುತ್ತೇನೆ. ಆದರೆ ನೀ ವು ಮಾಂಸಾಹಾರಿಗಳು, ಹಣ್ಣುಗಳನ್ನು ನೀ ವು ತಿನ್ನುವುದಿಲ್ಲವಲ್ಲಾ…” ಎಂದಿತು ಮಂಗ. “ಹಸಿವಿನಿಂದ ಕಣ್ಣೇ ಕಾಣುತ್ತಿಲ್ಲ. ಈಗ ನಾವು ಏನು ಸಿಕ್ಕಿ ದರೂ ತಿಂದುಬಿಡುವ ಪರಿಸ್ಥಿತಿಯಲ್ಲಿದ್ದೇವೆ,” ಎಂದಿತು ಮೊಸಳೆ.
ಮಂಗನಿಗೆ ಅಯ್ಯೋ ಎನಿಸಿ, ಹಣ್ಣುಗಳನ್ನು ಕಿತ್ತು ಕೊ ಟ್ಟಿತು. ಹಣ್ಣು ತಿಂದ ಮೊಸಳೆ, “ಓ ಇದೆಷ್ಟು ಸಿಹಿಯಾಗಿದೆ!” ಎಂದು ಹೊ ಟ್ಟೆ ತುಂಬಾ ತಿಂದು, ತನ್ನ ಹೆಂಡತಿಗೂ ಹಣ್ಣುಗಳನ್ನು ತೆಗೆದುಕೊ ಂಡು ಹೋ ಯಿತು. ಹೀ ಗೆ ಮೊಸಳೆ ದಿನಾ ಬಂದು ಹಣ್ಣು ತಿನ್ನುವುದು ಹೆಂಡತಿಗೆ ಕೊ ಂಡೊ ಯ್ಯು ವುದು ನಡೆಯುತ್ತಿತ್ತು.್ತುಮಂಗ ಮತ್ತು ಮೊಸಳೆ ಒಳ್ಳೆಯ ಸ್ನೇಹಿತರಾದವು. ಮಂಗ ಮೊಸಳೆಯ ಬೆನ್ನೇರಿ ಕುಳಿತು ನದಿಯಲ್ಲಿ ಸವಾರಿ ಮಾಡುತ್ತಾ, ಆಟವಾಡುತ್ತಾ ಇರುತ್ತಿತ್ತು.
ತುಂಬಾ ದಿನಗಳ ಬಳಿಕ, ಮೊಸಳೆಯ ಹೆಂಡತಿ ತನ್ನ ಗಂಡನ ಬಳಿ, “ರೀ … ಮಂಗ ಕೊ ಡುವ ಈ ಹಣ್ಣುಗಳು ಎಷ್ಟು ರುಚಿ, ಎಷ್ಟು ಸಿಹಿಯಾಗಿರುತ್ತವೆ. ದಿನಾ ಇಂಥದ್ದೇ ಹಣ್ಣುಗಳನ್ನು ತಿನ್ನುವ ಮಂಗ ಇನ್ನೆಷ್ಟು ರುಚಿಯಾಗಿರಬಹುದು, ಅಲ್ವೇನ್ರೀ…?” ಎಂದಿತು. “ಛೇ .. ಹಾಗೆಲ್ಲಾ ಹೇ ಳಬೇ ಡ! ಅವನು ನನ್ನ ಗೆಳೆಯ. ದಿನವೂ ನಮಗೆ ಹಣ್ಣು ಕೊ ಟ್ಟು ನಮ್ಮ ಹಸಿವನ್ನು ನೀ ಗಿಸುತ್ತಿದ್ದಾನೆ. ಅವನ ಹೃದಯ ತುಂಬಾ ಒಳ್ಳೆಯದು” ಎಂದಿತು ಮೊಸಳೆ.
ಅದಕ್ಕೆ ಹೆಂಡತಿ, “ಅದೇ , ಅದೇ . ಅವನ ಹೃದಯ ತುಂಬಾ ಒಳ್ಳೆಯದು. ಅದು ಇನ್ನೂ ಸಿಹಿಯಾಗಿರುತ್ತದೆ. ನನಗೆ ಅವನ ಹೃದಯ ತಿನ್ನುವ ಆಸೆಯಾಗಿದೆ. ನನಗೆ ಅದು ಬೇ ಕೇ ಬೇ ಕು. ಇಲ್ಲದಿದ್ದರೆ ನಾನು ನಿಮ್ಮ ಹತ್ತಿರ ಮಾತನಾಡುವುದಿಲ್ಲ,” ಎಂದು ಅಳುತ್ತಾ ಕುಳಿತಿತು. ‘ಈಗ ಏನಪ್ಪಾ ಮಾಡೋ ದು. ಹೇ ಗಾದರೂ ಮಾಡಿ ಮಂಗನನ್ನು ಮನೆಯೊಳಕ್ಕೆ ಕರೆದುಕೊ ಂಡು ಬರಬೇ ಕು,’ ಎಂದುಕೊ ಳ್ಳುತ್ತಾ ಮೊಸಳೆ ಮಂಗ ಇದ್ದಲ್ಲಿಗೆ ಹೋ ಗಿ, “ಮಂಗಣ್ಣಾ, ನಿನ್ನನ್ನು ನನ್ನ ಹೆಂಡತಿ ಊಟಕ್ಕೆ ಕರೆದಿದ್ದಾಳೆ. ಈದಿನ ನೀ ನು ನಮ್ಮ ಮನೆಗೆ ಬರಲೇ ಬೇ ಕು,” ಎಂದಿತು. ಮಂಗನಿಗೆ ತುಂಬಾ ಸಂತೋ ಷವಾಯಿತು. “ಆಗಲಿ ನಡಿ ಹೋ ಗೋ ಣಾ” ಎನ್ನು ತ್ತಾ ಮಂಗ, ಮೊಸಳೆಯ ಬೆನ್ನೇರಿ ಕುಳಿತಿತು.
ಹೀ ಗೆ ಸಾಗುವಾಗ ಮೊಸಳೆಗೆ ತುಂಬಾ ಬೇ ಸರವಾಯಿತು. ‘ನಮಗೆ ಉಣ್ಣಲು ಇಲ್ಲದ ಕಾಲದಲ್ಲಿ ಸಹಾಯ ಮಾಡಿದ ಮಂಗನನ್ನು ಇಂದು ನನ್ನ ಹೆಂಡತಿ ತಿಂದು ಬಿಡುತ್ತಾಳಲ್ಲಾ. ಏನಾದರೂ ಆಗಲಿ ಇವನಿಗೆ ಇದ್ದ ್ದು ಇದ್ದಹಾಗೆ ಹೇ ಳೋ ಣ. ಹೇ ಗೂ ನದಿಯ ನಡುವಲ್ಲಿದ್ದೇವೆ, ಮಂಗನಿಂದ ಇನ್ನು ದಡಕ್ಕೆ ಹೋ ಗುವುದು ಅಸಾಧ್ಯ,’ ಎಂದುಕೊ ಂಡು ಮೊಸಳೆ, “ಮಂಗಾ ನಾನು ಈಗ ನಿನ್ನನ್ನು ನಮ್ಮ ಮನೆಗೆ ಕರೆದುಕೊ ಂಡು ಹೋ ಗುತ್ತಿರುವುದು ಏಕೆಂದರೆ, ನನ್ನ ಹೆಂಡತಿ ನಿನ್ನ ಹೃದಯ ತಿನ್ನಬೇ ಕಂತೆ, ಅವಳಿಗೆ ತುಂಬಾ
Kannada Policy Stories
- ಮಂಗ ಮತ್ತು ಮೊಸಳೆ
- ಬುದ್ದಿವಂತ ಕಾಗೆಗಳು
- ಋಷಿ ಮತ್ತು ನಾಣ್ಯ
- ಆನೆ ಮತ್ತು ಗೆಳೆಯರ ಕಥೆ
- ಸರ್ಕಸ್ಸಿನ ಆನೆಗಳ ಕಥೆ
- ಬಾವಿ ಮತ್ತು ರೈತ ಕಥೆ
- ದುರಾಸೆಯ ಇಲಿ
ಮುಖಭಂಗ
ಒಂದು ಹಳ್ಳಿ. ಅಲ್ಲಿ ಹೆಚ್ಚು – ಕಡಿಮೆ ಎಲ್ಲ ಬಡ ಕುಟುಂಬಗಳೇ ಇದ್ದವು.
ಒಂದು ಮಾತ್ರ ಶ್ರೀಮಂತ ಕುಟುಂಬವಿತ್ತು . ಈ ಕುಟುಂಬದ ಯಜಮಾನ ಬಡ ಕುಟುಂಬಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಗರ್ವದಿಂದ ಮೆರೆಯುತ್ತಿದ್ದನು . ಇವನಿಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕೆಂದು ಎಲ್ಲರೂ ಕಾಯುತ್ತಿದ್ದರು . ಆ ಹಳ್ಳಿಯಲ್ಲಿ ಪ್ರತಿ ವರ್ಷದಂತೆ ಗ್ರಾಮ ದೇವತೆಯ ಹಬ್ಬ ಬಂತು .
ಸುತ್ತಮುತ್ತಲಿನ ಗ್ರಾಮದವರು ಸೇರಿದ್ದರು. ಗ್ರಾಮ ದೇವತೆಯ ಹಬ್ಬದ ವಿಶೇಷ ದೇವತೆಯ ಮೈ ಮೇಲೆ ಹಾಕಿರುವ ಸೀರೆಯನ್ನು ಹರಾಜು ಹಾಕುವುದಾಗಿತ್ತು . ಅದನ್ನು ತೆಗೆದುಕೊಂಡವರಿಗೆ ಪುಣ್ಯ ಲಭಿಸುವುದು ಎಂಬ ನಂಬಿಕೆಯಿತ್ತು . ಯಾವಾಗಲೂ ಸೀರೆ ಶ್ರೀಮಂತ ಕುಟುಂಬದ ಪಾಲಾಗುತ್ತಿತ್ತು .
ಈ ಸಾರಿ ಹಬ್ಬದಲ್ಲಿ ಹರಾಜು ಪ್ರಾರಂಭವಾಯಿತು , ಹರಾಜು ಕೂಗುವ ವ್ಯಕ್ತಿ ಸೀರೆ ತೋರಿಸುತ್ತಾ ಒಂದು ಸಾವಿರ ಎಂದನು . ಶ್ರೀಮಂತ ‘ ಎರಡು ಸಾವಿರ ‘ ಎಂದನು , ತಕ್ಷಣವೇ ಗುಂಪಿನಿಂದ ಐದು ಸಾವಿರ ‘ ಎಂಬ ಕೂಗು ಕೇಳಿಸಿತು . ಶ್ರೀಮಂತನಿಗೆ ಆಶ್ಚರ್ಯವಾಯಿತು . ನೋಡುತ್ತಾನೆ .
ತನ್ನ ಹಳ್ಳಿಯ ಬಡ ಕುಟುಂಬದ ವ್ಯಕ್ತಿಯೊಬ್ಬ ಕೂಗಿದ್ದು ! ಶ್ರೀಮಂತ ಏನನ್ನೂ ತೋರಿಸಿಕೊಳ್ಳದೆ ಮತ್ತೆ ಹತ್ತು ಸಾವಿರ ಎಂದನು . ಶ್ರೀಮಂತನ ಕೂಗಿಗೆ ಪ್ರತಿಯಾಗಿ “ ನನ್ನ ಇಡೀ ಆಸ್ತಿ ‘ ಎಂದು ಬಿಟ್ಟಿ ಬಡವ . ಇದನ್ನು ಕೇಳಿದ ಶ್ರೀಮಂತ ಆತನ ಸರಿಸಮಾನವಾಗಿ ಕೂಗಲು ಧೈರ್ಯ ಬರಲಿಲ್ಲ .
ಏನೂ ಮಾತು ಹೊರಡಲಿಲ್ಲ. ಮುಖಭಂಗವಾದಂತಾಗಿ ಮೆಲ್ಲನೆ ಕಾಲುಕಿತ್ತನು .
ತಪ್ಪು ಉತ್ತರ
ಕಾಡಿನ ಒಂದು ಮರದ ಮೇಲೆ ಒಂದು ಕೋಗಿಲೆ ವಾಸವಾಗಿತ್ತು . ಅದೇ ಮರದ ‘ ಮೇಲೆ ಬೇರೆ ಕೆಲವು ಪಕ್ಷಿಗಳು ವಾಸವಾಗಿದ್ದವು , ಕೋಗಿಲೆಗೆ ಖುಷಿಯಾದಾಗ ಅದು ಹಾಡುತ್ತಿತ್ತು ,
ಇದರಿಂದ ಬೇರೆ ಪಕ್ಷಿಗಳಿಗೆ ಕಿರಿಕಿರಿಯಾಗುತ್ತಿತ್ತು . ಒಂದು ದಿನ ಎಲ್ಲ ಪಕ್ಷಿಗಳು ಸೇರಿ ಅದನ್ನು ಅಲ್ಲಿಂದ ಓಡಿಸಿದವು . ಅದು ಕಾಡಿನ ಹೊರಗೆ ಇರುವ ಒಂದು ಒಣಮರದ ಮೇಲೆ ಹೋಗಿ ಕುಳಿತುಕೊಂಡಿತು .
ಅಷ್ಟರಲ್ಲೇ ಮತ್ತೊಂದು ಕೋಗಿಲೆ ಅಲ್ಲಿಗೆ ಬಂತು. ತನ್ನ ಬಂಧುವೊಂದು ನಿರಾಶೆಯಿಂದ ಕುಳಿತಿರುವುದನ್ನು ಕಂಡು ಅದರ ನಿರಾಶೆಗೆ ಕಾರಣ ಏನೆಂದು ಕೇಳಿತು.
ಅದಕ್ಕೆ ಮೊದಲನೆಯ ಕೋಗಿಲೆ ‘ ನಾನು ಕಾಡಿನಲ್ಲಿರುವ ಒಂದು ಮರದ ಮೇಲೆ ವಾಸಿಸುತ್ತಿದ್ದೆ . ನನಗೆ ಖುಷಿಯಾದಾಗ ಹಾಡುತ್ತಿದ್ದೆ . ಒಂದು ದಿನ ಆ ಮರದ ಮೇಲೆ ವಾಸವಾಗಿದ್ದ ಬೇರೆ ಪಕ್ಷಿಗಳು ‘ ನೀನೇಕೆ ಹಾಡುವಿ ? ” ಎಂದು ಕೇಳಿದವು . ಅದಕ್ಕೆ ನಾನು ನನ್ನ ಸಂತೋಷಕ್ಕಾಗಿ ಹಾಡುತ್ತೇನೆ .
ಹಾಡದೇ ನಾನು ಬದುಕಿರಲಾರೆ ಎಂದು ಹೇಳಿದೆ . ಆಗ ಎಲ್ಲ ಪಕ್ಷಿಗಳು ಸೇರಿ ನನ್ನನ್ನು ಅಲ್ಲಿಂದ ಓಡಿಸಿಬಿಟ್ಟವು ‘ ಎಂದು ಹೇಳಿತ್ತು . ಆಗ ಎರಡನೆಯ ಕೋಗಿಲೆ ‘ ನೀನು ಅವಕ್ಕೆ ತಪ್ಪು ಉತ್ತರ ಕೊಟ್ಟಿರುವೆ .
ಅದಕ್ಕೆ ಹಾಗಾಗಿದೆ ನಿನ್ನ ಉತ್ತರದಿಂದ ಅವು ನೀನೊಬ್ಬ ಸ್ವಾರ್ಥ. ನಿನ್ನ ಮೇಲೆ ನಿನಗೆ ನಿಯತ್ರಣವಿಲ್ಲ ಎಂದು ತಿಳಿದುಬಿಟ್ಟಿವೆ .
ನನಗೂ ಆ ಪಕ್ಷಿಗಳು ಅದೇ ಪ್ರಶ್ನೆಯನ್ನು ಕೇಳಿದ್ದವು . ಅದಕ್ಕೆ ನಾನು ‘ ನಾನು ನಿಮ್ಮನ್ನು ಖುಷಿಪಡಿಸುವದಕ್ಕಾಗಿ ಹಾಡುತ್ತೇನೆ ‘ ಎಂದು ಹೇಳಿದ್ದೆ .
ಆದ್ದರಿಂದ ನಾನು ಈಗಲೂ ಅವುಗಳ ಜೊತೆಯಲ್ಲಿಯೇ ವಾಸಿಸುತ್ತಿದ್ದೇನೆ ಎಂದು ಹೇಳಿತು . ನಾವು ಆಡುವ ಮಾತು ತುಂಬ ಜಾಣ್ನೆಯಿಂದ ಕೊಡಿರಬೇಕು .
ಆದ್ದರಿಂದಲೇ ‘ ಮಾತು ಬಲ್ಲವನಿಗೆ ಜಗಳವಿಲ್ಲ , ಊಟ ಬಲ್ಲವನಿಗೆ ರೋಗವಿಲ್ಲ ‘ ಎಂದು ಹಿರಿಯರು ಹೇಳಿರುವುದು .
ಹಣೆಬರಹ
ಒಂದಾನೊಂದು ಕಾಲದಲ್ಲಿ ಸುವರ್ಣಗಿರಿ ಎಂಬ ರಾಜ್ಯದಲ್ಲಿ ‘ ಚಂದ್ರಸೇನನೆಂಬ ರಾಜನು ಆಳುತ್ತಿದ್ದನು . ಆತನು ದಾನ , ಧರ್ಮ , ಪೂಜೆ ಪುನಸ್ಕಾರಗಳಿಗೆ ಪ್ರಖ್ಯಾತನಾಗಿದ್ದನು .
ನನ್ನ ರಾಜ್ಯದಲ್ಲಿ ಬಡವರೇ ಇರಬಾರದು . ಎಲ್ಲರೂ ಸುಖ ಸೌಭಾಗ್ಯಗಳಿಂದ ಕೂಡಿರಬೇಕು ‘ ಎಂಬ ಭಾವನೆ ಹೊಂದಿ ತನ್ನ ಪ್ರಜೆಗಳನ್ನು ಮಕ್ಕಳಿಗಿಂತ ಹೆಚ್ಚಾಗಿ ಕಾಣುತ್ತಿದ್ದನು . ಆಗಾಗ ಸಂಜೆಯ ವೇಳೆ ಮಂತ್ರಿ ಸುಗುಣಾನಂದನೊಡನೆ ವಾಯು ವಿಹಾರಕ್ಕೆ ಹೋಗುತ್ತಿದ್ದನು .
ಒಂದು ದಿನ ಹೀಗೆ ಹೋಗುತ್ತಿರುವಾಗ ಸಂಜೆ ಮುಗಿದು ಕತ್ತಲಾಗುತ್ತ ಬಂತು . “ ಮಂತ್ರಿಗಳೇ ಬೇಗ ರಾಜಧಾನಿ ಸೇರೋಣ . ಕುದುರೆಯನ್ನು ವೇಗವಾಗಿ ಓಡಿಸಿ ‘ ಎಂದು ಸೂಚಿಸಿದನು .
ಕೊಂಚ ದೂರ ಹೋಗುವುದರಲ್ಲಿ ರಾಜನು ಕುದುರೆಯನ್ನು ನಿಲ್ಲಿಸಿ ‘ ಮಂತ್ರಿಗಳೇ ಕತ್ತಲಾಗುತ್ತಾ ಬಂದಿದ್ದರೂ ಕುಟೀರದ ಮುಂದೆ ತೋಟದ ಕೆಲಸ ಮಾಡುತ್ತಿರುವ ವಿಪ್ರ ಯಾರು ? ತುಂಡುಬಟ್ಟೆ ಉಟ್ಟು ಚಳಿಯನ್ನು ಲೆಕ್ಕಿಸದ ಆ ಮಹಾ ಪುರುಷ ಯಾರು ‘ ಎಂದು ಕೇಳಿದರು .
ಆಗ ಮಂತ್ರಿಯು ಆತ ಶೇಷ ಶರ್ಮನೆಂಬ ಪ್ರಖಾಂಡ ಪಂಡಿತ , ಶ್ರಮಜೀವಿ ಎಂದರು . “ ನಮ್ಮ ರಾಜ್ಯದಲ್ಲಿ ಆತ ಏಕೆ ಇಷ್ಟು ಕಷ್ಟಪಡಬೇಕು ಅರಮನೆಗೆ ಕರೆಸಿ ಬೇಕಾದ್ದನ್ನು ಕೊಡಿ ‘ ಎಂದನು . `
ಕ್ಷಮಿಸಿ ಮಹಾರಾಜ ಆತ ಮಹಾ ಆತ್ಮ ಗೌರವಿ , ಯಾರಿಂದ ಏನೂ ಬೇಡುವುದಿಲ್ಲ . ಯಾರ ಸಹಾಯವನ್ನೂ ಬಯಸುವುದಿಲ್ಲ . ಕಾಯಕ ಮಾಡಿ ಹೆಂಡತಿ ಮಕ್ಕಳನ್ನು ಪೋಷಿಸುತ್ತಿದ್ದಾನೆ ‘ ಎಂದು ಉತ್ತರಿಸಿದನು ಮಂತ್ರಿ .
ಸರಿ ನಡೆಯಿರಿ ಇದಕ್ಕೆ ನಾವೇ ಒಂದು ಉಪಾಯ ಮಾಡೋಣ ‘ ಎಂದು ಇಬ್ಬರೂ ಹೊರಟರು . ಮಾರನೆಯ ದಿನ ಶೇಷ ಶರ್ಮನ ತೋಟದಲ್ಲಿ ಒಂದು ಚೀಲ ಸಿಕ್ಕಿತು . ಅದರ ತುಂಬಾ ಚಿನ್ನದ ನಾಣ್ಯಗಳಿದ್ದವು .
ಕೂಡಲೆ ಆತ ಅದನ್ನು ಕೈಯಲ್ಲಿ ಹಿಡಿದು ರಾಜ ದರ್ಬಾರಿಗೆ ನಡೆದ ‘ ಮಹಾ ಪ್ರಭು ನನ್ನ ತೋಟದಲ್ಲಿ ಚಿನ್ನದ ನಾಣ್ಯಗಳಿರುವ ಈ ಚೀಲ ಸಿಕ್ಕಿದೆ , ಯಾರದೋ ಏನೋ ವಿಚಾರಣೆ ನಡೆಸಿ ಅವರಿಗೆ ತಲುಪಿಸಿ ಎಂದು ಹೇಳಿ ಹೊರಡಲನುವಾದ
ಆಗ ರಾಜನು ‘ ಅದು ಯಾರದೇ ಆಗಲಿ , ನಿಮ್ಮ ತೋಟದಲ್ಲಿ ಸಿಕ್ಕಿದೆ . ನೀವೇ ಅನುಭವಿಸಿ ‘ ಎಂದನು . ಆಗ ಶೇಷ ಶರ್ಮ ‘ ಕ್ಷಮಿಸಿ ಮಹಾ ಪ್ರಭು , ನಿತ್ಯ ನನ್ನ ತೋಟಕ್ಕೆ ಅನೇಕ ಹಕ್ಕಿಗಳು ಬರುತ್ತವೆ .
ನವಿಲು , ಜಿಂಕೆಗಳು ಬರುತ್ತವೆ . ಅವು ನಮ್ಮದೆಂದರೆ ದ್ರೋಹವಾಗುವುದಿಲ್ಲವೆ ? ಅನೇಕ ಮಂದಿ ದಾರಿಹೋಕರು ನಮ್ಮ ತೋಟದ ಹಣ್ಣು ಹಂಪಲು ತಿಂದು ಹೋಗುತ್ತಾರೆ .
ಅವರು ನಮ್ಮವರಾಗುತ್ತಾರೆ ? ಕ್ಷಮಿಸಿ ಆ ಹಣ ಯಾರದೋ ಅವರಿಗೆ ಕೊಡಿ ‘ ಎಂದನು . ‘ ನಮ್ಮ ಹಣೆಯಲ್ಲಿ ಬರೆದಿರುವಷ್ಟು ನಮಗೆ ಸಿಕ್ಕಿದೆ . ನಾನು ಅದರಿಂದ ಸುಖವಾಗಿದ್ದೇನೆ ‘
ಎಂದು ವಂದಿಸಿ ಕುಟೀರಕ್ಕೆ ತೆರಳಿದನು . ಮಂತ್ರಿ ` ಪ್ರಭು ಹಣೆಬರಹ ಬದಲಾಯಿಸಲು ಬರೆದ ಆ ಬ್ರಹ್ಮನಿಂದಲೇ ಸಾಧ್ಯವಿಲ್ಲ ಎಂದನು .